Tuesday, June 20, 2023

ಪುತ್ತೂರು 'ಗೋಪಣ್ಣ' ಸ್ಮೃತಿ ಗೌರವ ಪ್ರದಾನ

 

ಗೋವಿಂದ ನಾಯಕ್ ಪಾಲೆಚ್ಚಾರು ಹಾಗೂ ಬಿ.ಸುಲೋಚನಾ ಅವರಿಗೆ

  • ಪುತ್ತೂರು 'ಗೋಪಣ್ಣ' ಸ್ಮೃತಿ ಗೌರವ ಪ್ರದಾನ

ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ್ಯಕ್ರಮವು ಈಚೆಗೆ ಪುತ್ತೂರಿನ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರ ಬಪ್ಪಳಿಗೆಯ 'ಅಗ್ರಹಾರ' ನಿವಾಸದಲ್ಲಿ ಜರುಗಿತು. (16-6-2023) 

ಜಗನ್ನಿವಾಸರ ತೀರ್ಥರೂಪರಾದ ಗೋಪಾಲಕೃಷ್ಣಯ್ಯ ಅವರು ವಿಧಿವಶರಾಗಿ ಐವತ್ತು ವರುಷವಾಯಿತು. ನೆನಪಿಗಾಗಿ ನಿವೃತ್ತ ಅಧ್ಯಾಪಿಕೆ ಶ್ರೀಮತಿ ಬಿ.ಸುಲೋಚನಾ ಅವರಿಗೆ 'ಗೋಪಣ್ಣ ಸ್ಮೃತಿ ವಿಶೇಷ ಗೌರವ' ಹಾಗೂ ಯಕ್ಷಗುರು ಗೋವಿಂದ ನಾಯಕ್ ಪಾಲೆಚ್ಚಾರು ಅವರಿಗೆ 'ಗೋಪಣ್ಣ ಸ್ಮೃತಿ ಗೌರವ'ವನ್ನು ಪ್ರದಾನಿಸಲಾಯಿತು



ಗೌರವ ಸ್ವೀಕರಿಸಿದ ಸುಲೋಚನಾ ಅವರು ಮಾತನಾಡಿಅಕ್ಷರ ಕಲಿಸಿದ ಗುರುವನ್ನು ನೆನಪಿಸಿ, ಸಂಮಾನಿಸುವ ಪರಿಪಾಠ ವರ್ತಮಾನಕ್ಕೊಂದು ಮಾದರಿ. ಇಳಿವಯಸ್ಸಿನಲ್ಲಿ ತುಂಬಾ ಖುಷಿ ತಂದಿದೆಎಂದರು. ಕಲಾವಿದ ನಾ. ಕಾರಂತ ಪೆರಾಜೆ ಹಾಗೂ ಪಿ.ಜಿ.ಚಂದ್ರಶೇಖರ ರಾವ್ ಸಂಮಾನಿತರನ್ನು ನುಡಿಹಾರಗಳ ಮೂಲಕ ಅಭಿನಂದಿಸಿದರು. ಭಾಗವತ ರಮೇಶ ಭಟ್ ಪುತ್ತೂರು ಹಾಗೂ ವೈಷ್ಣವಿ ರಾವ್ ಗುಣಕಥನ ಫಲಕ ವಾಚಿಸಿದರು.

ಪಿ.ಜಿ.ಜಗನ್ನಿವಾಸ ರಾವ್, ಶ್ರೀವಿದ್ಯಾ ಜೆ. ರಾವ್, ಪಿ.ಜಿ.ಚಂದ್ರಶೇಖರ ರಾವ್, ರತ್ನಕುಮಾರಿ ರಾವ್, ಶ್ರೀಕೃಷ್ಣ ರಾವ್, ಶ್ರೀಮತಿ ರೇವತಿ, ಶ್ರೀಮತಿ ಸುಜಾತ, ಶ್ರೀಮತಿ ಶಾಂತಾ ಹಾಗೂ ಮನೆಯವರು ಜತೆಸೇರಿ ಗೌರವಿಸಿದರು. ವೇದಿಕೆಯಲ್ಲಿ ಯಕ್ಷಗಾನ ಹಿಮ್ಮೇಳದ ಭಾಷಾವಿದರಾದ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಲಕ್ಷ್ಮೀಶ ಅಮ್ಮಣ್ಣಾಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

 

ಕೊನೆಯಲ್ಲಿ 'ರುಕ್ಮಿಣಿ ಸ್ವಯಂವರ' ಪ್ರಸಂಗದ ತಾಳಮದ್ದಳೆ ಜರುಗಿತು. ಗೋವಿಂದ ನಾಯಕ್ ಪಾಲೆಚ್ಚಾರು, ರಮೇಶ ಭಟ್ ಪುತ್ತೂರು, ಮಹೇಶ್ ಕನ್ಯಾಡಿ, ಮುರಾರಿ ಪಂಜಿಗದ್ದೆ (ಭಾಗವತರು), ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ರಾಮಪ್ರಸಾದ್ ವದ್ವ, ಶಿತಿಕಂಠ ಭಟ್, ರಾಜಗೋಪಾಲ ಜೋಷಿ (ಚೆಂಡೆ, ಮದ್ದಳೆ); ರಾಧಾಕೃಷ್ಣ ಕಲ್ಚಾರ್, ಗುಂಡ್ಯಡ್ಕ ಈಶ್ವರ ಭಟ್, ಡಾ.ವಿನಾಯಕ ಭಟ್ ಗಾಳಿಮನೆ,  ನಾ. ಕಾರಂತ ಪೆರಾಜೆ, ಹರೀಶ ಬೊಳಂತಿಮೊಗರು, ರಾಮ ಜೋಯಿಸ ಬೆಳ್ಳಾರೆ, ಶಶಿಧರ ರಾವ್ ಕನ್ಯಾಡಿ (ಅರ್ಥದಾರಿಗಳು) ಮೊದಲಾದ ಕಲಾವಿದರು 'ಗೋಪಣ್ಣ ಸ್ಮೃತಿ' ಕಾರ್ಯಕ್ರಮದಲ್ಲಿ 'ಪ್ರೀತಿ ಮತ್ತು ಆತ್ಮೀಯತೆ'ಯಿಂದ ಭಾಗವಹಿಸಿದ್ದರು