ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ 'ಈಶಾವಾಸ್ಯ
ಪ್ರಶಸ್ತಿ ಪುರಸ್ಕಾರ' ಪ್ರದಾನ. ದಿನಾಂಕ 1-6-2025, ರವಿವಾರದಂದು ಪುತ್ತೂರು ಬೊಳ್ವಾರಿನ ಶ್ರೀ ದುರ್ಗಾಪರಮೇಶ್ವರೀ
(ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರದ ವಠಾರದಲ್ಲಿ ಸಂಜೆ ಗಂಟೆ 5-30ಕ್ಕೆ ಪ್ರಶಸ್ತಿ ಪ್ರದಾನ
ಸಮಾರಂಭ ಜರುಗಲಿದೆ.
ಈ ಸಂದರ್ಭದಲ್ಲಿ ಶ್ರೀ ಕೃಷ್ಣಪ್ರಕಾಶ್ ಉಳಿತ್ತಾಯರು ಬರೆದ ಪಾಲೆಚ್ಚಾರು ಗೋವಿಂದ ನಾಯಕ್ ಅವರ ಕಲಾಯಾನ ಕೃತಿ 'ಗೋವಿಂದ
ಗಾಥೆ' ಅನಾವರಣಗೊಳ್ಳಲಿದೆ. 'ಈಶಾವಾಸ್ಯ ಪೆರ್ಮಂಕಿ' ಮತ್ತು ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ
ಪ್ರತಿಷ್ಠಾನ (ರಿ) ಬೊಳ್ವಾರು - ಇವರ ಜಂಟಿ ಆಯೋಜನೆಯಲ್ಲಿ ಕಾರ್ಯಕ್ರಮ ಸಂಪನ್ನವಾಗಲಿದೆ.
ಶ್ರೀ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ
ನಡೆಯುವ ಸಮಾರಂಭವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಶ್ರೀ ಕ್ಷೇತ್ರದ ಪವಿತ್ರಪಾಣಿ
ಶ್ರೀ ಬಾಲಸುಬ್ರಹ್ಮಣ್ಯ ಭಟ್ ವಹಿಸಲಿದ್ದಾರೆ. 'ಗೋವಿಂದ ಗಾಥೆ' ಪುಸ್ತಕದ ಕುರಿತು ಅಡಿಕೆ ಪತ್ರಿಕೆಯ
ಸಹಾಯಕ ಸಂಪಾದಕ ಶ್ರೀ ನಾ. ಕಾರಂತ ಪೆರಾಜೆ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಅಗರಿ ಎಂಟರ್ಪ್ರೈಸಸ್ ಇದರ ಶ್ರೀ ಅಗರಿ ರಾಘವೇಂದ್ರ ರಾವ್, ಸಾಹಿತಿ ಶ್ರೀ ಲಕ್ಷ್ಮೀ
ಮಚ್ಚಿನ, ವಿಶ್ರಾಂತ ಪ್ರಾಂಶುಪಾಲ ಶ್ರೀ ಮಹಾಲಿಂಗೇಶ್ವರ ಭಟ್ ಹಾಗೂ ಹಿರಿಯ ಮದ್ಲೆಗಾರ್ ಶ್ರೀ ವೆಂಕಟ್ರಮಣ
ಉಳಿತ್ತಾಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರಂಭದ ಪೂರ್ವದಲ್ಲಿ 'ಜಾಂಬವತಿ ಕಲ್ಯಾಣ' ಪ್ರಸಂಗದ
ತಾಳಮದ್ದಳೆ ಜರುಗಲಿದೆ.
No comments:
Post a Comment