Thursday, September 27, 2018

ಸುಮನಸ ಮತ್ತು ಅಡ್ಡಿಗೆ



ಯಕ್ಷಗಾನ ಕಲಾವಿದರಿಗೆ, ಕಲಾಸಕ್ತರಿಗೆ, ಕಲಾಭಿಮಾನಿಗಳಲ್ಲಿ ಇರಬೇಕಾದ ಪುಸ್ತಕ
 ‘ ಸುಮನಸ’ ಮತ್ತು ‘ಅಡ್ಡಿಗೆ’

ಸುಮನಸ : 21 ಮಂದಿ ಕೀರ್ತಿಶೇಷ ಕಲಾವಿದರ ಪರಿಚಯ ಮತ್ತು 32 ಮಂದಿ ಹಿರಿಯ ಕಲಾವಿದರ ಕಲಾಯಾನಕ್ಕೆ ಬೆಳಕು ಹಾಕುವ ವಿಶೇಷ ಲೇಖನಗಳಿವೆ. ಎಲ್ಲೂ ಸುಲಭವಾಗಿ ಸಿಗದ ಮಾಹಿತಿಗಳು.

ಸುಮನಸ ಕೃತಿಯ ಪ್ರಕಟಣೆಯನ್ನು ಸಂಪಾಜೆಯ ‘ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ’ ಮಾಡಿ ನನ್ನ ಅಕ್ಷರಯಾನವನ್ನು ಬೆಂಬಲಿಸಿದೆ. ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.

ಈ ಹಿನ್ನೆಲೆಯಲ್ಲಿ ‘ಸುಮನಸ’ ಕೃತಿಯನ್ನು ಓದುಗರಿಗೆ ರಿಯಾಯಿತಿ ದರದಲ್ಲಿ ನೀಡುತ್ತಿದ್ದೇನೆ.  ಪುಸ್ತಕದ ಬೆಲೆ ರೂ.150. ಯಕ್ಷಪ್ರಿಯ ಓದುಗರಿಗೆ ರಿಯಾಯಿತಿಯಲ್ಲಿ - ರೂ.80

ಅಡ್ಡಿಗೆ  (ಯಕ್ಷ ಯವನಿಕೆಯ ಸುತ್ತಮುತ್ತ) – ಯಕ್ಷಗಾನದ ಕುರಿತ ವಿಶೇಷ ಬರಹಗಳ ಅಂಕಣ. ಉದಾ : ‘ಬಪ್ಪ’ ಸಾರಿದ ಸಹಿಷ್ಣುತೆ, ಬಾಹುನ ಭಾವುಕ ಅಂತರಂಗ, ಕಾಫಿ ನಾಡಿನಲ್ಲಿ ಅರಳಿದ ಪಾಪಣ್ಣ, ಅಯ್ಯಪ್ಪ ಆಖ್ಯಾನಕ್ಕೆ ಅರ್ಧ ಶತಮಾನ, ಮೂಲ್ಕಿ ಮೇಳದ ಯಶೋಯಾನ, ಅಮೇರಿಕಾದಲ್ಲಿ ತಾಳಮದ್ದಳೆಯ ಹಸಿವು....) ಪುತ್ತೂರಿನ ಶ್ರೀ ಜ್ಞಾನಗಂಗಾ ಪುಸ್ತಕ ಮಳಿಗೆಯು ಪ್ರಕಾಶಿಸಿದೆ. ಈ ಪುಸ್ತಕದ ಬೆಲೆ ರೂ.100. . ಯಕ್ಷಪ್ರಿಯ ಓದುಗರಿಗೆ ರಿಯಾಯಿತಿಯಲ್ಲಿ  - ರೂ.70

ಪುಸ್ತಕದ ಕುರಿತು ತಮಗೆ ಆಸಕ್ತಿಯಿದ್ದರೆ ಎಂಓ ಮಾಡಬಹುದು. ಅಥವಾ ಆನ್ ಲೈನ್ ಮೂಲಕವೂ ಪಾವತಿ ಸಲ್ಲಿಸಬಹುದು. ಪುಸ್ತಕವನ್ನು ಸಾದಾ ಅಂಚೆಯಲ್ಲಿ ಕಳುಹಿಸಲಾಗುವುದು. ತಾವು ಎಂಒ ಅಥವಾ ಆನ್ ಲೈನ್ ಪಾವತಿ ಕಳುಹಿಸಿದ ತಕ್ಷಣ 9448625794 ಸಂಖ್ಯೆಗೆ ತಮ್ಮ ವಿಳಾಸವನ್ನು ಮೆಸ್ಸೇಜ್ ಅಥವಾ ವಾಟ್ಸಾಪ್ ಸಂದೇಶ ಕಳುಹಿಸಿದರೆ ಉಪಕಾರ. ಇಲ್ಲಿದಿದ್ದರೆ ಯಾರ ಪಾವತಿ ಎಂದು ಗೊತ್ತಾಗದು. 

(ನನ್ನ ವಿಳಾಸ : ನಾ. ಕಾರಂತ ಪೆರಾಜೆ, ಅಂಚೆ ಪೆಟ್ಟಿಗೆ 08, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು – 574 201 – ದ.ಕ. 9448625794, karanth2005@gmail.com)

Bank Details :
 Name : Narayana Karantha : Bank – Canara Bank, Puttur (Karnataka – D.K.Dist) S.B.A/c No. 0615101028712 :  IFSC Code – CNRB 0000615


1 comment:

  1. 99%ಕನ್ನಡ, 1%ಇತರೆ ಕನ್ನಡ ಕಂದನ ಕನ್ನಡದ ತಾಣ ಅದುವೇ https://www.spn3187.blogspot.in & https://t.me/spn3187 ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ

    ReplyDelete