Sunday, September 27, 2020

ಪದ್ಯಾಣ - ‘ಪದಯಾನ’ - ಎಸಳು 45




ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ -  ಎಸಳು 45

ಟಿವಿಯಲ್ಲಿ ಗಣಪಣ್ಣ......   

“ಈಟಿವಿ ವಾಹಿನಿಯಲ್ಲಿ ಎದೆತುಂಬಿ ಹಾಡಿದೆನು ಸರಣಿ ಕಾರ್ಯಕ್ರಮವು ಕನ್ನಾಡಿನ   ಎಳೆಯ ಪ್ರತಿಭೆಗಳಿಗೊಂದು ವರದಾನವಾಗಿತ್ತು. ಪ್ರತೀ ಸರಣಿಯಲ್ಲೂ ಬೇರೆ ಬೇರೆ ಕಲಾ ಕ್ಷೇತ್ರದ ಹಿರಿಯನ್ನು ಆಹ್ವಾನಿಸಿ, ಗೌರವಿಸಿ, ಅವರ ಅನುಭವಗಳಿಗೆ ಮಾತನ್ನು ಕೊಡುವುದು ಸರಣಿಯ ಹಿರಿಮೆ. ಖ್ಯಾತ ಸಂಗೀತಗಾರ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸರಣಿಯ ನಿರ್ವಾಹಕರಾಗಿದ್ದರು.

ನಮ್ಮ ಗಣಪಣ್ಣ - ಪದ್ಯಾಣ ಗಣಪತಿ ಭಟ್ - ಸರಣಿಗೆ ಆಹ್ವಾನಿತರಾಗಿದ್ದರು. ಯಕ್ಷಗಾನದ ಹಾಡನ್ನು ಹಾಡಿದರು. ಗಣಪಣ್ಣನ ಶಾರೀರವನ್ನು ಎಸ್.ಪಿ. ಕೊಂಡಡಿದರು. ಮೈಕ್ ಇಲ್ಲದೆ ನಿರರ್ಗಳವಾಗಿ ಹಾಡಬೇಕಾದರೆ ನಿಮ್ಮಂತಹ ಯಕ್ಷಗಾನ ಭಾಗವತರೇ ಸರಿ, ಎಂದು ಶ್ಲಾಘಿಸಿದರು. ಒಂದು ವಾಕ್ಯವು ಯಕ್ಷಗಾನದ ಅಭಿಮಾನಿಗಳ ಎದೆ ತುಂಬುವಂತಹುದು.

- ಆರ್.ಕೆ.ಭಟ್, ಬೆಳ್ಳಾರೆ,

ಪ್ರಧಾನ ಕಾರ್ಯದರ್ಶಿ

ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ, ಬೆಂಗಳೂರು

 

No comments:

Post a Comment