Saturday, June 23, 2018

ರಂಗಕ್ಕೆ ಮಾನ ತಂದ ಯಕ್ಷಯೋಗಿಗಳಿಗೆ ಯಕ್ಷಮಂಗಳ


         ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಂದು2018 ಎಪ್ರಿಲ್ 24 -  ಯಕ್ಷಮಂಗಳ ಪ್ರಶಸ್ತಿ ಪ್ರದಾನ. ನಾಲ್ವರು ಕಲಾಸಂತರಿಗೆ ಗೌರವ. ಎಲ್ಲರಿಗೂ ಎಂಭತ್ತು ಮೀರಿದ ವಯಸ್ಸು. ಒಬ್ಬೊಬ್ಬರ ಹಿರಿ ಸಾಧನೆಗಳನ್ನು ಅವಲೋಕಿಸಿದಾಗ ಯಕ್ಷಲೋಕದ ಶ್ರೀಮಂತಿಕೆ ಮಿಂಚಿತು. ಅವರ ಸಾಧನೆ, ಕೊಡುಗೆಗಳ ಮುಂದೆ ವರ್ತಮಾನದ ರಂಗ ನಾಚಿತು! ಶತಮಾನಗಳ ಹಿಂದಿನ ರಂಗಾನುಭವ ಬೀಗಿತು!
                ತೊಂಭತ್ತೆರಡರ ಮತ್ಯಾಡಿ ನರಸಿಂಹ ಶೆಟ್ಟಿಯವರು ಮಂದಾರ್ತಿ ದಶಾವತಾರ ಮೇಳದಲ್ಲಿ ವ್ಯವಸಾಯ ಮಾಡಿದವರು. ಒಟ್ಟು ಐವತ್ತು ವರುಷಗಳ ಕಲಾ ತಿರುಗಾಟ. ಗುರು ನಾರ್ಣಪ್ಪ ಉಪ್ಪೂರರ ಶಿಷ್ಯ. ಗುಂಡ್ಮಿ ರಾಮಚಂದ್ರ ನಾವಡರಿಂದಕುಂಜಾಲು ಶೈಲಿ ಭಾಗವತಿಕೆ ಅಭ್ಯಾಸ. ಬಡಗು ತಿಟ್ಟಿನ ಬಹುತೇಕ ಹಿರಿಯ ಮತ್ತು ಖ್ಯಾತ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಮಹಾ ಭಾಗವತ. ಐವತ್ತಕ್ಕೂ ಮಿಕ್ಕಿ ಪ್ರಸಂಗಗಳು ಕಂಠಸ್ಥ. ಶೆಟ್ಟರ ಬಹುತೇಕ ಯಕ್ಷ ತಿರುಗಾಟಲ್ಲಿ ಧ್ವನಿವರ್ಧಕಗಳಿಲ್ಲದೆ, ತನ್ನ ಕಂಠಶ್ರೀಯ ಶ್ರೀಮಂತಿಕೆಯಿಂದ ರಂಗ ಶ್ರೀಮಂತಿಕೆಯನ್ನು ತಂದವರು.
                ಪೆರುವೋಡಿ ನಾರಾಯಣ ಭಟ್ಟರದು ಶುದ್ಧ ಸಾಂಪ್ರದಾಯಿಕ ಸಹಜ ಹಾಸ್ಯ. ಹಾಸ್ಯಕ್ಕೆ ಮಾನ ತಂದ ಹಾಸ್ಯಗಾರ. ಪಾಪಣ್ಣ, ಬಾಹುಕ ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು. ಮೂಲ್ಕಿ ಮೇಳವನ್ನು ಮುನ್ನಡೆಸಿದ ಯಜಮಾನ. ಪಾತ್ರ ಗೌರವವನ್ನು ಎತ್ತರಕ್ಕೇರಿಸಿ, ತಾನೂ ಎತ್ತರಕ್ಕೆ ಬೆಳೆದ ಪೆರುವೋಡಿಯವರಿಗೆ ಈಗ ತೊಂಭತ್ತೆರಡರ ಹರೆಯ. ಮಾತಿಗೆ ಕುಳಿತರೆ ಒಂದು ಕಾಲಘಟ್ಟದ ರಂಗಬದುಕು, ಹಾಸ್ಯ ಬೆಳೆದು ಬಂದ ರೀತಿ, ರಂಗದ ಪಲ್ಲಟಗಳತ್ತ ಗಮನ ಸೆಳೆಯುತ್ತಾರೆ. ರಂಗದ ಮತ್ತು ವೈಯಕ್ತಿಕ ಕಷ್ಟ-ಸುಖಗಳನ್ನು ಹತ್ತಿರದಿಂದ ಅನುಭವಿಸಿದವರು.
                ಪಾತಾಳ ವೆಂಕಟ್ರಮಣ ಭಟ್ಟರಿಗೆ ಎಂಭತ್ತೈದರ ಹರೆಯ. ಶೃಂಗಾರ ರಸದ ಮಾನ. ರಂಗದ ರಾಣಿಯಾಗಿ ಮೆರೆದವರು. ತೆಂಕು-ಬಡಗು ತಿಟ್ಟುಗಳಲ್ಲಿ ವ್ಯವಸಾಯ. ಬೇಲೂರಿನ ಶಿಲಾಬಾಲಿಕೆಗಳನ್ನು ಅಧ್ಯಯನ ಮಾಡಿ ಯಕ್ಷಗಾನದ ಸ್ತ್ರೀಪಾತ್ರಗಳಿಗೆ ವೇಷಭೂಷಣಗಳನ್ನು ಸಿದ್ಧಪಡಿಸಿದ ಸಂಶೋಧಕ. ವೇಷಭೂಷಣಗಳನ್ನು ಸ್ವತಃ ಧರಿಸಿ ರಂಗದಲ್ಲಿ ಯಶ ಕಂಡವರು. ಪ್ರೇಕ್ಷಕರಿಂದ, ವಿಮರ್ಶಕರಿಂದ ಮೆಚ್ಚುಗೆ ಪಡೆದವರು. ರಂಗವು ತಾರಾಮೌಲ್ಯ ತಂದಿತ್ತ ಕೃತಜ್ಞತೆಯ ದ್ಯೋತಕವಾಗಿಪಾತಾಳ ಪ್ರಶಸ್ತಿಯನ್ನು ಸ್ಥಾಪಿಸಿ ಹಿರಿಯರನ್ನು ಗೌರವಿಸುವ ಅಪರೂಪದ ವ್ಯಕ್ತಿತ್ವ. ‘ಯಕ್ಷಶಾಂತಲಾಎನ್ನುವ ಅಭಿನಂದನ ಗ್ರಂಥವನ್ನು ಹೊಂದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು.
                ಎಂಭತ್ತನಾಲ್ಕರ ಹರೆಯದ ಡಾ.ಎನ್.ನಾರಾಯಣ ಶೆಟ್ಟರುಅಭಿನವ ನಾಗವರ್ಮಎಂದೇ ಪ್ರಸಿದ್ಧರು. ಅವರಯಕ್ಷಗಾನ ಛಂದೋಂಬುಧಿಕೃತಿ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ. ಯಕ್ಷಗಾನ ಕ್ಷೇತ್ರದಲ್ಲೇ ಇಂತಹ ಕೃತಿ ಅಪೂರ್ವ. ವರೆಗೆ ಬಂದ ಗ್ರಂಥಗಳಲ್ಲೆಲ್ಲಾ ಶ್ರೇಷ್ಟ ಕೃತಿ. ಉಪ್ಪಿನಂಗಡಿಯಲ್ಲಿ ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಾದಿ ಏರಿದವರು. ಸೊರ್ಕುದ ಸಿರಿಗಿಂಡೆ, ರಾಜಮುದ್ರಿಕೆ, ಬೆಂಗ್ ಬಾಲೆ ನಾಗಿ.. ಪ್ರಸಂಗಗಳ ರಚಯಿತರು. ಈಚೆಗಂತೂ ಛಂದಸ್ಸು, ಸಾಹಿತ್ಯಗಳ ಮಾತುಕತೆಗಳು ಅಲ್ಲಿಲ್ಲಿ ಮಿಂಚುತ್ತಿರುವುದಕ್ಕೆ ಶೆಟ್ಟರ ಸಾಹಿತ್ಯಗಳೇ ಅಡಿಗಟ್ಟು.
                ನಾಲ್ವರನ್ನು ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಪ್ರಶಸ್ತಿ ನೀಡಿ ಗೌರವಿಸಿತು. ಅದೇ ವೇದಿಕೆಯನ್ನು ಹಂಚಿಕೊಂಡ ನನಗೆ ಪ್ರಶಸ್ತಿ ಪುರಸ್ಕತರನ್ನು ಕಂಡಾಗ ಹಲವು ಚೋದ್ಯಗಳು ಕಾಡಿದುವು. ಒಂದು ಕಾಲಘಟ್ಟದಲ್ಲಿ ಯಕ್ಷಗಾನ ಕ್ಷೇತ್ರವನ್ನು ಸಶಕ್ತವಾಗಿ ಆಳಿದ, ಪ್ರಾಮಾಣಿಕತೆಗೆ ಮಾನ ತಂದಿತ್ತ ಇವರೆಲ್ಲಾ ಯಕ್ಷಸಂತರಂತೆ ಕಂಡರು. ತ್ಯಾಗ, ತಪಸ್ಸು ಎನ್ನುವ ಪದಗಳಿಗೆ ಪರ್ಯಾಯ ಪದವಾಗಿ ಕಂಡರು. ಖ್ಯಾತಿಯು ತಲೆಯೇರಿ ಕುಳಿತರೂ ರಂಗಕ್ಕೆ ತಲೆತಗ್ಗಿಸಿ ಗೌರವ ತಂದಿತ್ತವರು. ಇವರ ಸಾಧನೆಯನ್ನು ನೆನಪಿಸಿಕೊಳ್ಳುತ್ತಾ ಇದ್ದಂತೆ ವರ್ತಮಾನದ ರಂಗದ ಹಲವು ವಿಚಾರಗಳು ಮಿಂಚಿದುವು!
                ಪೆರುವೋಡಿಯವರು ಒಂದೆಡೆ ಹೇಳಿದ ನೆನಪು - ಪ್ರೇಕ್ಷಕರು ಸಾವಿರಾರು ಮಂದಿ ಆಟವನ್ನು ನೋಡುತ್ತಿರಬಹುದು. ಅವರ ಮಧ್ಯೆ ಒಬ್ಬ ಪ್ರೇಕ್ಷಕ ನನ್ನ ಅಭಿನಯವನ್ನು ಗಮನಿಸುತ್ತಿರುತ್ತಾನೆ. ಅವನಿಗಾಗಿ ನಾನು ರಂಗಕ್ಕೆ ವಂಚನೆ ಮಾಡದೆ ಅಭಿವ್ಯಕ್ತಿ ಮಾಡಬೇಕು. ಇವರ ಮಾತಿನ ಹಿನ್ನೆಲೆಯಲ್ಲಿ ಪ್ರಸ್ತುತ ರಂಗವನ್ನು ನೋಡಿದಾಗ - ಹಾಸ್ಯವು ಹಾಸ್ಯಾಸ್ಪದವಾಗಿ ಮಾನಗೆಟ್ಟು ಪ್ರೇಕ್ಷಕರೇ ತಲೆತಗ್ಗಿಸುವಂತೆ ಮಾಡಿದೆ ಎಂದರೆ ಕಠಿಣವಾಗಬಹುದೇನೋ. ಹಾಸ್ಯಗಾರ ಎನ್ನುವುದು ಈಗ ಒಂದು ಹುದ್ದೆ ಯಾ ಪೋಸ್ಟ್. ಕೆಲವೆಡೆ ಮಿಮಿಕ್ರಿಯೇ ಹಾಸ್ಯ! ಜವಾಬ್ದಾರಿ ಮರೆತ ಸ್ವ-ನೆಲೆ. ಆದರೆ ಪೆರುವಡಿಯವರಂತಹವರ ಹಿರಿಯರ ಜಾಡಿನಲ್ಲೇ ಹಾಸ್ಯವನ್ನು ಕಟ್ಟಿದ, ಕಟ್ಟುತ್ತಿರುವ ಬೆರಳೆಣಿಕೆಯ ಹಾಸ್ಯಗಾರರು ಇರುವುದರಿಂದ ಹಾಸ್ಯದ ಮಾನ ಸ್ವಲ್ಪವಾದರೂ ಉಳಿದಿದೆ.
                ಪಾತಾಳ ವೆಂಕಟ್ರಮಣ ಭಟ್ಟರದು ಹೆಣ್ಣು ವೇಷ. ಅವರ ಯೌವನದ ವೇಷವನ್ನು ನೋಡಿದವರುಗಂಡೋ, ಹೆಣ್ಣೋಎಂದು ಗೊಂದಲಕ್ಕೀಡಾದುದು ಇದೆಯಂತೆ! ಯಾವ ವೇಷಕ್ಕೆ ಎಷ್ಟು ಕುಣಿಯಬೇಕು ಎನ್ನುವ ಕಲ್ಪನೆಯನ್ನು ಅಭಿವ್ಯಕ್ತಿ ಮೂಲಕ ತೋರಿಸಿದವರು. ದಾಕ್ಷಾಯಿಣಿ, ದ್ರೌಪದಿ, ಮಾಲಿನಿ, ಸುಭದ್ರೆ, ಚಂದ್ರಮತಿ, ದಮಯಂತಿ.. ಪಾತ್ರಗಳಲ್ಲವೂ ಸ್ತ್ರೀಪಾತ್ರಗಳೇ. ಅವುಗಳ ಅಭಿವ್ಯಕ್ತಿಯಲ್ಲಿ ಭಿನ್ನತೆಯನ್ನು ಕಾಣಿಸಿದ,  ತನ್ನದು ವೇಷ ಎನ್ನುವ ಸ್ಪಷ್ಟ ಎಚ್ಚರವಿದ್ದ ಕಲಾವಿದ. ಇವರ ಕಲಾ ಬದುಕನ್ನು ಇಣುಕಿದಾಗ ಈಗಿನ ಸ್ತ್ರೀವೇಷಗಳಲ್ಲಿ ಯಾಕೋ ಭಾವಶುಷ್ಕತೆ ಕಾಣಿಸುತ್ತಿದೆ! ಯಕ್ಷಗಾನ ಮಸುಕುಮಸುಕಾಗಿ ಗೋಚರವಾಗುತ್ತದೆ!
                ನಾನು ಮತ್ಯಾಡಿ ನರಸಿಂಹ ಶೆಟ್ಟರ ಭಾಗವತಿಕೆಯನ್ನು ಕೇಳಿಲ್ಲ. ಹಿರಿಯರು ಮಾತನಾಡುವುದನ್ನು ಆಲಿಸಿದ್ದೇನೆ. ರಂಗದಲ್ಲಿ ಒತ್ತಿದ ಭಾಗವತಿಕೆಯ ಛಾಪಿನ ತೇವ ಇದೆಯಲ್ಲಾ, ವಯಸ್ಸಲ್ಲೂ ಅವರನ್ನು ನೆನಪಿಸುವಂತೆ ಮಾಡಿದೆ. ಈಗ ತೆಂಕು, ಬಡಗು ತಿಟ್ಟಿನ ಭಾಗವತಿಕೆಗಳ ವಿನ್ಯಾಸಗಳು ಪಲ್ಲಟಗೊಂಡಿವೆ. ಯುವ ಮನಸ್ಸುಗಳು ಜಾಗಟೆ, ತಾಳ ಹಿಡಿದಿದ್ದಾರೆ. ಒಳ್ಳೆಯ ಮತ್ತು ಖುಷಿ ಪಡುವ ವಿಚಾರ.  ಆದರೆ ಯಕ್ಷಗಾನದ ಹೊರತಾದ ವಿಚಾರಗಳೇ ವೈಭವ ಪಡೆದು ಅದೇ ಯಕ್ಷಗಾನ ಎಂದು ಬಿಂಬಿತವಾಗುವುದು ಆರೋಗ್ಯಕರವಲ್ಲ.
                ಯಕ್ಷಗಾನ ಛಂದೋಬುಧಿ ಕೃತಿಯ ಲೇಖಕ ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು ಅವರ ಹಳೆಗನ್ನಡ ಭಾಷೆ, ಸಾಹಿತ್ಯ, ಛಂದಸ್ಸುಗಳಲ್ಲಿ ತಜ್ಞತೆ. 2000ದಲ್ಲಿ ಕೀರ್ತಿಶೇಷ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರು ಶೆಟ್ಟರನ್ನು ಆಭಿನಂದಿಸುತ್ತಾ ಒಂದು ಮಾತು ಹೇಳಿದುದು ನೆನಪಾಗುತ್ತದೆ. ಅದು ಶೆಟ್ಟರ ಬೌದ್ಧಿಕತೆಗೆ ಆಭಿನಂದನೆಯೂ ಹೌದು – “ಯಕ್ಷಗಾನಕ್ಕೆ ಒಂದು ಲಕ್ಷಣ ಶಾಸ್ತ್ರವಿದೆ. ಅದಕ್ಕೆ ಛಂದಸ್ಸಿದೆ. ಅದಕ್ಕೆ ಲಯವಿದೆಎನ್ನುವುದನ್ನು ನಾರಾಯಣ ಶೆಟ್ಟರು ಸ್ಥಾಪಿಸಿದ್ದರಿಂದ ಹಾಡುಗಾರರಿಗೆ ಮತ್ತು ಮದ್ದಳೆಗಾರರಿಗೆ ತೊಂದರೆ ಆಗಿದೆ! ಹೊತ್ತು ನಾನು ಮೆಚ್ಚುವ ಎಲ್ಲಾ ಭಾಗವತರುಗಳಿಗೂ ಛಂದಸ್ಸನ್ನು ಲಯಬದ್ಧವಾಗಿ ಹಾಡುವ ತಾಕತ್ತು ಉಂಟು. ಸಾಮಥ್ರ್ಯ ಉಂಟು. ಆದರೆ ಮನಸ್ಸು ಮಾಡಬೇಕಷ್ಟೇ.”
                ನಾಲ್ಕು ಮಂದಿ ಪ್ರಶಸ್ತಿ ಪುರಸ್ಕøತರೊಂದಿಗೆ ವೇದಿಕೆಯಲ್ಲಿ ನಿಂತಾಗ ನನಗಂತೂ ಪುಳಕದ ಅನುಭವ. ಯಕ್ಷಲೋಕವನ್ನು ಆಪೋಶನ ಮಾಡಿದ ತಪಸ್ವಿಗಳಿವರು. ಎಷ್ಟೋ ಕಡೆ ಗಮನಿಸಿದ್ದೇನೆ. ಇಂತಿಷ್ಟು ವರುಷ ಇಂತಿಂತಹ ಮೇಳದಲ್ಲಿ ತಿರುಗಾಟ ಮಾಡಿದ್ದೇನೆ ಎಂದು ಬಯೋಡಾಟದಲ್ಲಿ ಬರೆಯುವಷ್ಟು ಮಾತ್ರ ಕಲಾವಿದ ಬೆಳೆಯುತ್ತಾನಷ್ಟೇ. ಕಿಟಕಿಯೊಳಗಿಂದ ಆಚೆಗಿನ ಲೋಕವನ್ನು ನೋಡುತ್ತಿಲ್ಲ. ನೋಡುವಂತಹ ನೋಟವಿದ್ದರೂ, ಅವಕಾಶವಿದ್ದರೂ ತನ್ನನ್ನು ತಾನು ಕುಬ್ಜಗೊಳಿಸಿಕೊಳ್ಳುವ ಅನೇಕ ಪ್ರತಿಭಾವಂತರು ಯಾಕೆ ಹಾಗಿದ್ದಾರೆ ಎನ್ನುವುದೇ ಚೋದ್ಯ! ನಾಲ್ವರೂ ಎಂದೂ ತಮ್ಮ ಹಗ್ಗದಲ್ಲಿ ತಮ್ಮನ್ನು ಕಟ್ಟಿಕೊಳ್ಳಲಿಲ್ಲ! ಹಾಗಾಗಿ ಎಂಭತ್ತೈದರ ಬಳಿಕವೂ ಗೌರವ ಪಡೆಯುವ ಅರ್ಹತೆ ಬಂದಿದೆ

Prajavani / ದಧಿಗಿಣತೋ / 27-4-2018

               

No comments:

Post a Comment