Monday, November 17, 2025

'ರಂಗದುಡಿಮೆಗೆ ಸೀಮಿತವಾದ ಕಲಾಯಾನ'

 


“ಯಕ್ಷಗಾನ ಕಲಾವಿದರ ಸಾಧನೆಗಳು ಅಕಾಡೆಮಿಕ್ ನೆಲೆಯಲ್ಲಿ ದಾಖಲಾದುದು ತೀರಾ ಕಡಿಮೆಒಬ್ಬೊಬ್ಬ ಕಲಾವಿದನಲ್ಲೂ ಅಪ್ರತಿಮವಾದ ಕಲಾ ಸಂಪನ್ಮೂಲಗಳಿವೆಅವೆಲ್ಲಾ ರಂಗ ದುಡಿಮೆಗೆ ಅಥವಾ ಸಂಮಾನದ ಅಭಿನಂದನಾ ಮಾತುಗಳಿಗೆ ಸೀಮಿತವಾಗಿದೆಕಲಾವಿದನ ಕಾಲಾ ನಂತರ ಆತನ ಸಾಧನೆಗಳು ಮರೆವಿಗೆ ಜಾರುತ್ತದೆ ಹಿನ್ನೆಲೆಯಲ್ಲಿ ಕನಿಷ್ಠ ದಾಖಲಾತಿಗಳು ನಡೆಯಬೇಕುಯಕ್ಷಗಾನ ಕೇಂದ್ರಗಳುಅಧ್ಯಯನ ಸಂಸ್ಥೆಗಳುಯಕ್ಷಗಾನದ ಸಕ್ರಿಯ ಹವ್ಯಾಸಿ ಸಂಘಗಳು ತಮ್ಮ ಮಿತಿಯಲ್ಲಿ  ಕಾರ್ಯವನ್ನು ಮಾಡಿದರೆ ಮುಂದಿನ ತಲೆಮಾರಿಗೆ ಕಲಾವಿದನ ಸಾಧನೆಯನ್ನು ಪರಿಚಯಿಸಿದಂತಾಗುತ್ತದೆಎಂದು ಕಲಾವಿದಲೇಖಕ ನಾಕಾರಂತ ಪೆರಾಜೆ ಹೇಳಿದರು.

ಅವರು ಮಧೂರು ಕ್ಷೇತ್ರದಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಹಿರಿಯ ಕಲಾವಿದ ಕೀರ್ತಿಶೇಷ ಮಧೂರು ಗಣಪತಿ ರಾವ್ ಅವರನ್ನು ಕಲಾ ಯಾನವನ್ನು ನೆನಪಿಸುತ್ತಾ,“ಯಕ್ಷಗಾನ ಸಂಘಗಳ ಪ್ರದರ್ಶನಗಳು ವೃತ್ತಿ ರಂಗಭೂಮಿಯ ನೆರಳಾಗಬಾರದುಹಿರಿಯರನ್ನು ನೆನಪಿಸುವ ಕಾರ್ಯ ಸ್ತುತ್ಯ” ಎಂದರುಕುತ್ಯಾಳ ಡ್ಲು ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರವು ತನ್ನ 'ರಜತರಂಗಸಂಭ್ರಮದ ಪ್ರಯುಕ್ತ 'ಹಿರಿಯರ ನೆನಪುಸರಣಿ ಕಾರ್ಯಕ್ರಮವನ್ನು (16-11-2025) ಆಯೋಜಿಸಿತ್ತು.

ಶ್ರೀ ಎಡನೀರು ಮಠದ ಸತೀಶ್ ಎಡನೀರು ದೀಪಜ್ವಲನದ ಮೂಲಕ ಸಮಾರಂಭವನ್ನು ಉದ್ಘಾಟಿಸಿದರುಹಿರಿಯ ಜ್ಯೋತಿಷಿ ನಾರಾಯಣ ರಂಗಾಭಟ್ಟಮಧೂರು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ್ ಉಪಸ್ಥಿತರಿದ್ದರು ಸಂದರ್ಭದಲ್ಲಿ ಮಧೂರು ಗಣಪತಿ ರಾವ್ ಅವರ ಚಿರಂಜೀವಿ ಶ್ರೀ ಕೃಷ್ಣ ರಾವ್ ಮಧೂರು ಇವರನ್ನು ಭಾಗವತ ತಲ್ಪಣಾಜೆ ವೆಂಕಟ್ರಮಣ ಭಟ್ ಅಭಿನಂದಿಸಿದರುಕಲಾವಿದ ಪೆರ್ಮುದೆ  ಜಯಪ್ರಕಾಶ್ ಶೆಟ್ಟಿಯವರು ಶುಭ ಹಾರೈಸಿದರು.

ಗೋಪಾಲಕೃಷ್ಣ ಕೆಇವರು ಸ್ವಾಗತಿಸಿನಿರ್ವಹಿಸಿದರುಕೃಷ್ಣಮೂರ್ತಿ ಅಡಿಗ ವಂದಿಸಿದರುಸುರೇಶ್ ಮಣಿಯಾಣಿವಿಘ್ನೇಶ್ ಕಾರಂತಸುಜನ್ಆಕಾಶ್ಅರ್ಜುನ್‌ ಸಹಕರಿಸಿದರು.

ಕೊನೆಯಲ್ಲಿ 'ಕರ್ಣ ಭೇದನಪ್ರಸಂಗದ ತಾಳಮದ್ದಳೆ ಸಂಪನ್ನಗೊಂಡಿತುಕಲಾವಿದರಾಗಿ ತಲ್ಪಣಾಜೆ ವೆಂಕಟ್ರಮಣ ಭಟ್ (ಭಾಗವತರು), ಲಕ್ಷ್ಮೀಶ ಬೆಂಗ್ರೋಡಿ (ಮದ್ದಳೆ), ಪವನ್ ಸ್ವರ್ಗ (ಚೆಂಡೆ), ಅರ್ಪಿತ್‌  ಶೆಟ್ಟಿ ಕೂಡ್ಲು (ಚಕ್ರತಾಳ); ನಾಕಾರಂತ ಪೆರಾಜೆಸದಾಶಿವ ಆಳ್ವ ತಲಪಾಡಿಚಂದ್ರಮೋಹನ್ ಕೂಡ್ಲುಕೃಷ್ಣಮೂರ್ತಿ ಅಡಿಗ (ಅರ್ಥದಾರಿಗಳುಸಹಕರಿಸಿದರುಕಾರ್ಯಕ್ರಮಕ್ಕೆ ಯಕ್ಷಕಲಾಕೌಸ್ತುಭ ಮಧೂರು ಇವರ ಸಹಕಾರವಿತ್ತು.