ನಿವೃತ್ತ ಅಧ್ಯಾಪಕ, ಯಕ್ಷಗಾನ ಕಲಾವಿದ ಮಂಗಲ್ಪಾಡಿ ತಿಂಬರ ಗೋಪಾಲಕೃಷ್ಣ ಮಯ್ಯರು ಅಕ್ಟೋಬರ್ 19ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಎಂಭತ್ತು ವರುಷ ವಯಸ್ಸಾಗಿತ್ತು.
ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಬಹುಕಾಲ ಸೇವೆ ಸಲ್ಲಿಸಿದ ಮಯ್ಯರು ಖ್ಯಾತ ಯಕ್ಷಗಾನ ಭಾಗವತರಾಗಿದ್ದರು. ತನ್ನ ಕಂಚಿನ ಕಂಠ ಮತ್ತು ಪ್ರಸಂಗದ ಹಿಡಿತಗಳಿಂದ ಅವರ ಭಾಗವತಿಕೆಯಲ್ಲಿ ಆಟಗಳು ಯಶಸ್ಸಾಗುತ್ತಿದ್ದುವು. ವೇಷಧಾರಿಯಾಗಿಯೂ ಅನುಭವ. ದಿ.ಕುಂಬಳೆ ಶೇಷಪ್ಪ ಅವರ ನೇತೃತ್ವದಲ್ಲಿದ್ದ ಉಪ್ಪಳ ಶ್ರೀ ಭಗವತಿ ಮೇಳಕ್ಕೆ ಬಹುಕಾಲ ಅವರ ಸೇವೆ ಸಲ್ಲಲ್ಪಟ್ಟಿತ್ತು. ಅಮ್ಟಾಡಿ ಮೇಳದಲ್ಲೂ ತಿರುಗಾಟ ಮಾಡಿದ್ದರು.
ತನ್ನ ಇಳಿ ವಯಸ್ಸಲ್ಲೂ ಸ್ಥಳೀಯ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಹಳ್ಳಿಯ ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕೆಂಬ ದೃಷ್ಟಿಯಿಂದ ಕೋಡಿಬೈಲು ಎಂಬಲ್ಲಿ ಶಾಲೆಯೊಂದನ್ನು ಆರಂಭಿಸಿದ ಹೆಗ್ಗಳಿಕೆ ಇವರದು. ಇವರ ಪತ್ನಿ ಜಯಲಕ್ಷ್ಮೀ ಮಯ್ಯ. ಮಂಗಲ್ಪಾಡಿ ಗ್ರಾಮ ಪಂಚಾಯತಿನ ಪ್ರತಾಪನಗರದ ಸದಸ್ಯೆ.
ಅಗಲಿದ ಚೇತನಕ್ಕೆ ಕಂಬನಿ. ಅಕ್ಷರ ನಮನ.
Friday, October 22, 2010
Subscribe to:
Post Comments (Atom)
ಒಂದು ಕಾಲದಲ್ಲಿ ಮೆರೆದಡಿದ ಕಲಾವಿದರು ಇವರು. ಬಾಲ್ಯದಲ್ಲಿ ಭಗವತಿ ಮೇಳದ ಆಟ ನಮಗೆಲ್ಲ ಅತಿ ಸುಲಭದಲ್ಲಿ ಆಸ್ವಾದಿಸಲು ಸಿಗುತ್ತಿತ್ತು ವರ್ಷಕ್ಕೆ ಕಡಿಮೆಯೆಂದರೂ ಆರೇಳು ಆಟಗಳು ಸಿಗುತ್ತಿದ್ದು. ಆವಾಗೆಲ್ಲ ಮಯ್ಯರ ಸ್ವರ ಚಿರಪರಿಚಿತ. ಮಡಿದ ಕಲಾವಿದನಿಗೆ ಆದರಾಂಜಲಿ ಅರ್ಪಿಸಿ ಸೂಕ್ತವಾಗಿ ಸ್ಮರಿಸಿದ ತಮಗೆ ಧನ್ಯವಾದಗಳು.
ReplyDelete