Monday, June 22, 2015

ಇಂದು ಅಡೂರು ಶ್ರೀಧರ ರಾವ್ ವಿಧಿವಶ


ಯಕ್ಷಗಾನದ ಹಿರಿಯ ಕಲಾವಿದ ಅಡೂರು ಶ್ರೀಧರ ರಾವ್ - Adoor Shridhara Rao - ಇಂದು (22-6-2015) ವಿಧಿವಶರಾದರು. ವೇಷಧಾರಿ, ಅರ್ಥಧಾರಿ. ಸಂಘಟಕ. ಅಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ಮೂಲಕ ನೂರಾರು ಯಕ್ಷಗಾನೀಯ ಚಟುವಟಿಕೆಯನ್ನು ನಡೆಸಿದವರು. ತೆಂಕುತಿಟ್ಟು ಯಕ್ಷಗಾನದ ಪಾರಂಪರಿಕ ಮುಖವರ್ಣಿಕೆಯ ತಯಾರಿಯಲ್ಲಿ 'ಇದಮಿತ್ಥಂ' ಎನ್ನುವ ನಿಲುವು. ಸಾವಿರಾರು ಮುಖವರ್ಣಿಕೆಗಳು ರೂಪುಗೊಂಡಿದ್ದವು. ಇದಕ್ಕಾಗಿ ಸತತ ಅಧ್ಯಯನ. ಬದುಕಿನ ಒಂದು ಕಾಲಘಟ್ಟದ ತನಕ ಇವರೊಂದಿಗೆ ಕೀರ್ತಿಶೇಷ ಪ್ಯಾರ್ ನೂವೂರು ಸಾಥ್ ನೀಡಿದ್ದರು.ಮನೆಯಂಗಳದಲ್ಲಿ ಯಕ್ಷಗಾನದ ಸಮ್ಮೇಳನ ನಡೆಸಿದ ಕೀರ್ತಿ ಇವರದು. ಒಂದೆರಡು ಪ್ರಸಂಗಗಳನ್ನು ದಾಖಲಾತಿ ಮಾಡಿದ್ದರು. ಅಡೂರು ಮೇಳದ ಕೆಲವು ಪರಿಕರಗಳ ಯಥಾವತ್ ಮುಖವರ್ಣಿಕೆಗಳನ್ನು ತಯಾರಿಸಿದವರು. ತನ್ನ ಮನೆಯಲ್ಲಿ ಕಲಾವಿದರಿಗೆ ಊಟ, ವಸತಿ ನೀಡಿ ಗೌರವಿಸಿದ ಹಿರಿಯ. ಅಡೂರು ಶ್ರೀಧರ ರಾವ್ ಕೆಲವು ಸಮಯದಿಂದ ಅಸ್ವಸ್ಥರಾಗಿದ್ದರು. ಅಗಲಿದ ಚೇತನಕ್ಕೆ ಅಕ್ಷರ ನಮನ.

No comments:

Post a Comment