Monday, October 24, 2022

ಪದ್ಯಾಣ ಗಣಪತಿ ಭಟ್ಟರ ‘ನೆನಪು’ - ‘ಪದ್ಯಾಣ ಪ್ರಶಸ್ತಿ’ ಪ್ರದಾನ.




ನಿನ್ನೆ (23-10-2022) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಶ್ರೀ ನಟರಾಜ ವೇದಿಕೆ’ಯಲ್ಲಿ ಭಾಗವತ ಪದ್ಯಾಣ ಗಣಪತಿ ಭಟ್ಟರ ‘ನೆನಪು’ ಕಾರ್ಯಕ್ರಮ.

* ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಆಶೀರ್ವಚನ.

* ಕಲಾಪೋಷಕ, ‘ಪದ್ಯಾಣ ಪ್ರಶಸ್ತಿ ಸಮಿತಿ’ಯ ಗೌರವಾಧ್ಯಕ್ಷ ಡಾ.ಟಿ.ಶ್ಯಾಮ ಭಟ್ಟರ ಸಭಾಧ್ಯಕ್ಷತೆ

* ಪುತ್ತೂರು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಮುಳಿಯ ಕೇಶವ ಪ್ರಸಾದರಿಂದ ನಲ್ನುಡಿ

* ಯಕ್ಷ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿಯವರಿಂದ ‘ಪದ್ಯಾಣ ಸ್ಮೃತಿ’

* ರಸರಾಗಚಕ್ರವರ್ತಿ ಶ್ರೀ ದಿನೇಶ ಅಮ್ಮಣ್ಣಾಯರಿಗೆ ಹಾಗೂ ಭಾಗವತ ಹಂಸ ಶ್ರೀ ಪುತ್ತಿಗೆ ರಘುರಾಮ ಹೊಳ್ಳರಿಗೆ ‘ಪದ್ಯಾಣ ಪ್ರಶಸ್ತಿ’ ಪ್ರದಾನ.

* ಪ್ರಶಸ್ತಿ ಪುರಸ್ಕೃತರ ಕುರಿತಾದ  ‘ಹಸ್ತಕ’ ಬಿಡುಗಡೆ. (ಸಂ. ನಾ. ಕಾರಂತ ಪೆರಾಜೆ)

* ಪದ್ಯಾಣರ ಶಿಷ್ಯ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರಿಗೆ ‘ಪದ್ಯಾಣ ಶಿಷ್ಯ ಸಂಮಾನ’ ಹಾಗೂ ಪದ್ಯಾಣರ ಆಭಿಮಾನಿ ಶ್ರೀ ರಾಮ ಜೋಯಿಸ್ ಬೆಳ್ಳಾರೆಯವರಿಗೆ ‘ಪದ್ಯಾಣ ಅಭಿಮಾನಿ ಶಿಷ್ಯ ಸಂಮಾನ.’

* ವೇಷಧಾರಿ, ಅರ್ಥದಾರಿ, ಸುಳ್ಯ ಪ್ರತಿಭಾ ವಿದ್ಯಾಲಯದ ಪ್ರಾಚಾರ್ಯ ಶ್ರೀ ವೆಂಕಟರಾಮ ಭಟ್ಟ ಸುಳ್ಯ ಇವರಿಂದ ಅಭಿನಂದನಾ ನುಡಿ ಹಾರಗಳು.

* ದಿನಪೂರ್ತಿ ಜರುಗಿದ ಕಾರ್ಯಕ್ರಮ. * ಪದ್ಯಾಣ ಮನೆಯವರ ಆಯೋಜನೆ.

(ಚಿತ್ರಗಳು : ಶ್ರೀ ದುರ್ಗಾಪ್ರಸಾದ್ ದಿವಾಣ, ಕಟೀಲು)


 

No comments:

Post a Comment