Tuesday, May 10, 2011

ಖ್ಯಾತ ಮದ್ದಳೆ ವಾದಕ ಗೋರೆ ನಿಧನ

ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದ ಖ್ಯಾತ ಮದ್ದಳೆ ವಾದಕ ಪ್ರಭಾಕರ ಗೋರೆ ಮೇ 9ರಂದು ಕುಂಜಿಬೆಟ್ಟು ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಅಸ್ವಸ್ಥರಾಗಿ ಬಳಿಕ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಖ್ಯಾತ ಭಾಗವತ ಕೀರ್ತಿಶೇಷ ದಾಮೋದರ ಮಂಡೆಚ್ಚ ಅವರ ಪ್ರೇರಣೆಯಿದ ಕರ್ನಾಟಕ ಮೇಳಕ್ಕೆ ಸೇರಿದ ಗೋರೆಯವರು ಸುಮಾರು ಮೂರು ದಶಕಗಳ ಕಾಲದ ವ್ಯವಸಾಯ ಮಾಡಿದ್ದರು. ಬಳಿಕ ಐದು ವರುಷ ಮಂಗಳಾದೇವಿ ಮೇಳದಲ್ಲಿ ತಿರುಗಾಟ. ಕಳೆದ ಆರು ವರುಷದಿಂದ ಎಡನೀರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು.

ಇವರು ತಬಲಾ ವಾದಕರಾಗಿಯೂ ಪ್ರಾವಿಣ್ಯ ಪಡೆದಿದ್ದರು.

4 comments:

  1. its a very sad news.. I believe Gore was one of the unique and finest maddaLegara of thenku thittu..

    ReplyDelete
  2. ಯಕ್ಷಲೋಕಕ್ಕೆ ಅಪಾರ ನಷ್ಟ .. ತಮ್ಮದೇ ಆದ ಶೈಲಿಯಲ್ಲಿ ಮೆರೆದ ಗೋರೆಯವರು ಸ್ಥಿತಪ್ರಜ್ಞರಾಗಿ ನುಡಿಸುತ್ತಿದ್ದ ಮದ್ದಲೆ ಇನ್ನಿಲ್ಲವೆಂಬಾಗ ಮನಸ್ಸಿಗೆ ವೇದನೆಯಾಗುತ್ತಿದೆ. ಎಡನೀರು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಅಮ್ಮನ್ನಾಯರ ಪದಗಳಿಗೆ ಅತ್ಯುತ್ತಮ ಸಾಥ್ ಕೊಡುತ್ತಿದ್ದರು.. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ .

    ReplyDelete
  3. ಮದ್ದಲೆ ವಾದನಕ್ಕೆ ಯಕ್ಷಗಾನದಲ್ಲಿ ಸ್ಟಾರ್ ವಾಲ್ಯು ತಂದು ಕೊಟ್ಟ ಕಲಾವಿದ. ಪ್ರತಿಯೊಂದು ಪದಕ್ಕೂ ತನ್ನದೇ ಅದ ಪೂರ್ಣತ್ವವನ್ನು ಕಲ್ಪಿಸಿಕೊಡಲು ಅವರ ಪ್ರಯತ್ನ ಸಹಕಾರಿಯಾಗುತ್ತಿತ್ತು. ಅವರಿದ್ದರೆ ನಾವೆಲ್ಲ ಚೆಂಡೆ ರಹಿತ ಸೌಮ್ಯಪದಗಳಿಗಾಗಿ ಕಾದು ಕುಳಿತಿರುತ್ತಿದ್ದೆವು. ಕಾರ್ಯಕ್ರಮದ ಒಂದೆರಡು ಪದವಾದರೂ ಸರಿ ಅದರಿಂದ ಮಾನಸಿಕ ಸಂತೃಪ್ತಿಯನ್ನು ಪಡೆಯುತ್ತಿದ್ದೆವು.

    ReplyDelete