Saturday, December 29, 2018

‘ಕಲಾರಂಗಕ್ಕೆ ಸಿರಿಬಾಗಿಲು ಪ್ರಶಸ್ತಿ’ ಬದ್ಧತೆಗೆ ಸಂದ ಮಾನ



                ಪತ್ತನಾಜೆಯ ಬಳಿಕ ಕಲಾವಿದರು ಕಾಣಸಿಗುವುದು ದೀಪಾವಳಿಯ ಬಳಿಕಹೀಗೆನ್ನುವ ಕಾಲವಿತ್ತು! ಇನ್ನೂ ಒಂದು ಮಾತಿತ್ತು, “ದೀಪಾವಳಿ ನಂತರ ಮೇಳಕ್ಕೆ ಹೊರಟರೆ ಮತ್ತೆ ಮನೆ ಸೇರುವುದು ಪತ್ತನಾಜೆಗೆ! ಸೇವೆಯೋ, ಹೊಟ್ಟೆಪಾಡೋ ಏನೇ ಇರಲಿ; ಆರು ತಿಂಗಳ ಕಾಲ ಮನೆಯ ಮರೆವು. ಚೌಕಿಯೇ ಮನೆ. ಸಹಕಲಾವಿದರೇ ಜತೆಗಾರರು. ಮೇಳವೇ ಯಜಮಾನ ಯಾ ಕುಟುಂಬದ ಹಿರಿಯ - ಇದು ಬಣ್ಣದ ಲೋಕದ ಬೆರಗು. ಯೋಗಕ್ಷೇಮಕ್ಕೆ ಅವನವನೇ ಹೊಣೆ! ರಂಗದಲ್ಲಿದ್ದಷ್ಟು ಹೊತ್ತು ಆತ ಸೂಪರ್! ಬಣ್ಣ ಕಳಚಿದ ಬಳಿಕ ಆತಏಕಾಂಗಿ.’
                ಕಲಾವಿದನಿಗೆಏಕಾಂಗಿತನದ ಅನುಭವ ಬರಬಾರದು, ಮೌನಕ್ಕೆ ಜಾರಬಾರದು, ಆಶಕ್ತತೆಯಿಂದ ಸಂಸಾರದ ಹಳಿ ತಪ್ಪಬಾರದು, ಆರೋಗ್ಯದಿಂದ ಕಸುಬು ಮೊಟಕಾಗಬಾರದು, ಕಲೆಯನ್ನು ನಂಬಿದ ಕಲಾವಿದನಿಗೆ ಕೈತಾಂಗು ಆಗಲು ರೂಪುಗೊಂಡಕಲಾರಂಗ ಉಡುಪಿ ರಿ.’ ಸಂಸ್ಥೆಯ ಸುವರ್ಣ ಸಡಗರಕ್ಕೆ ಇನ್ನು ಏಳೇ ವರುಷ. ಇಷ್ಟು ದೀರ್ಘ ಕಾಲ ಕಲಾವಿದರಿಗೆ ನೆರಳಾಗಿ ನಿಂತ ಸಂಸ್ಥೆಯ ಯಶದ ಗುಟ್ಟು – ‘ಬದ್ಧತೆ. ಬದ್ಧತೆಗೆ ಆಗೊಮ್ಮೆ ಈಗೊಮ್ಮೆ ಅಲುಗಾಟ, ಕುಲುಕಾಟಗಳು ಬಂದುದಿದೆ. ಹಗುರ ಮಾತುಗಳೂ ರಾಚಿದ್ದಿದೆ. ಹೀಗಿದ್ದೂ ಸದಸ್ಯ ಕಲಾವಿದರ ಬೆಂಬಲದಿಂದ ಕಲಾಮನಸ್ಸುಗಳೊಳಗೆ ಗಟ್ಟಿಯಾಗಿ ಬೇರಿಳಿಸಿದೆ.
                ಕಲಾರಂಗದ ಸ್ಥಾಪಕಾಧ್ಯಕ್ಷರು ಡಾ.ಬಿ.ಬಿ.ಶೆಟ್ಟಿ. ಒಂದು ಕಾಲಘಟ್ಟದಲ್ಲಿ ಉಡುಪಿಯನಿರ್ಮಲಾ ಲಂಚ್ ಹೋಮ್ಕಲಾವಿದರ ಮನದ ಮಾತಿಗೆ ತಾಣ. ಜತೆಗೆ ಊಟ, ತಿಂಡಿಗಳ ಉಚಿತ ಸಮಾರಾಧನೆ. ಇಲ್ಲಿಗೆ ಎಂಟ್ರಿ ಕೊಟ್ಟ ಕಲಾವಿದರು ಹಸಿದು ಹೋದುದೇ ಇಲ್ಲ. (ಹೀಗನ್ನುವಾಗ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಉಳಿತ್ತಾಯರ ಹೋಟೆಲು ಕಲಾವಿದರ ಹೊಟ್ಟೆ ತಂಪು ಮಾಡಿದ ದಿನಮಾನಗಳು ನೆನಪಾಗುತ್ತದೆ.) ರುಚಿಶುದ್ಧಿಯ ಪ್ರದರ್ಶನದ ಯೋಚನೆಯ ಫಲವಾಗಿಕಲಾರಂಗಹುಟ್ಟಿಕೊಂಡಿತು. 1975ರಲ್ಲಿ ಡಾ.ಶಿವರಾಮ ಕಾರಂತರಿಂದ ಶುಭ ಚಾಲನೆ.
                ಸುಂದರ ಶೆಟ್ಟಿ, ವಿಶ್ವಜ್ಞ ಶೆಟ್ಟಿ, ಎಸ್.ವಿ.ಭಟ್, ಅಮ್ಮುಂಜೆ ನಾಗೇಶ ನಾಯಕ್, ಪ್ರೊ. ಬಿ.ವಿ.ಆಚಾರ್ಯ, ಪ್ರೊ.ಜಿ.ಆರ್.ರೈ, ಆನಂದ ಗಾಣಿಗ, ಎಂ.ಎಸ್.ಕೃಷ್ಣನ್, .ನಾರಾಯಣ, ಕೆ.ಬಾಲಕೃಷ್ಣ ರಾವ್.. ಇವರೆಲ್ಲಾ ಡಾ.ಶೆಟ್ಟರೊಂದಿಗೆ ಸಂಸ್ಥೆಯನ್ನು ಕಟ್ಟಿದ ಮಹನೀಯರು. ಹದಿನೆಂಟು ವರುಷಗಳ ಕಾಲ ಕಲಾರಂಗವನ್ನು ಡಾಕ್ಟರ್ ಆರೋಗ್ಯಪೂರ್ಣವಾಗಿ ಬೆಳೆಸಿದರು. ನಂತರ ವಿಶ್ವಜ್ಞ ಶೆಟ್ಟಿ, ಎಸ್.ವಿ.ಭಟ್ಟರ ಸಾರಥ್ಯ. ಆರಂಭದ ದಿನಮಾನದಲ್ಲಿ ಸದಸ್ಯತ್ವ ಹನ್ನೆರಡು ರೂಪಾಯಿ!
                ಸಂಸ್ಥೆಯ ಬೆಳ್ಳಿ ಹಬ್ಬದಲ್ಲಿ ಪ್ರೊ.ಉದ್ಯಾವರ ಮಾಧವ ಆಚಾರ್ಯರ ಒಂದು ಸಲಹೆಯಿಂದ ಕಾರ್ಯಹೂರಣವು ಹೊಸ ಹಾದಿಗೆ ಹೊರಳಿತು. “ಕನಸುಗಳಿಲ್ಲದ ರಾತ್ರಿಗಳನ್ನು ಕಳೆದವರ ಭವಿಷ್ಯಕ್ಕೆ ಭದ್ರತೆ ಕೊಡುವುದು ಬೇಡವೇ.” ಮಾಧವ ಆಚಾರ್ಯರ ಮಾತಿನ ಅಂತರಂಗದಲ್ಲೊಮ್ಮೆ ಇಳಿದು ನೋಡಿದರೆ ಕಲಾವಿದನ ತನುಶ್ರಮ, ಕೌಟುಂಬಿಕ ಚಿತ್ರಗಳು ಹಾದು ಹೋಗುತ್ತವೆ. ವರುಷವೇ ಪ್ರೊ.ಬಿ.ವಿ.ಆಚಾರ್ಯ ದತ್ತಿಯಕ್ಷನಿಧಿಸ್ಥಾಪನೆ. ವ್ಯವಹಾರ ಕುಶಲತೆಗೆ ಸಾಂಸ್ಥಿಕ ರೂಪ. ಕಲಾವಿದರ ಸಂಕಷ್ಟಕ್ಕೆ ಸಹಭಾಗಿಗಳಾಗುವ ನಿರ್ಧಾರ.
                ನೀವು ರಾತ್ರಿಗಳನ್ನು ಬೆಳಗಿಸಿದ್ದೀರಿ. ನಾವು ನಿಮ್ಮ ಬದುಕಿನಲ್ಲಿ ಒಂದಿಷ್ಟು ಬೆಳಕು ತರುವ ಪ್ರಯತ್ನವನ್ನು ಮಾಡುತ್ತೇವೆ.” ಕಲಾರಂಗದ ನಿರ್ಧಾರ. ವಿಮಾ ಏಜೆಂಟರು, ಮೇಳದ ಯಜಮಾನರ ಆಶಯವನ್ನು ಒಂದೇ ರೇಖೆಗೆ ತರಲಾಯಿತು. ಉದ್ದೇಶಗಳನ್ನು ಹೆಣೆಯಲಾಯಿತುಕಲಾವಿದರಿಗಾಗಿ ಗುಂಪು ವಿಮೆ, ಮೆಡಿಕ್ಲೈಮ್, ಅಪಘಾತ ವಿಮೆ, ಒಂದು ಲಕ್ಷದ ಜೀವನ್ ಆನಂದ್, ಗೃಹ ನಿರ್ಮಾಣಕ್ಕೆ ಉಡುಗೊರೆ, ಪೌರಾಣಿಕ ಪುಸ್ತಕ ಭಂಡಾರ, ಅಶಕ್ತರಿಗೆ ಆರ್ಥಿಕ ನೆರವು, ಆರೋಗ್ಯ ತಪಾಸಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ರಿಯಾಯಿತಿ ದರದ ಬಸ್ ಪಾಸ್, ಪುನಶ್ಚೇತನ ಶಿಬಿರ, ವಿಳಾಸಗಳ ಡೈರಿ ಪ್ರಕಟಣೆ. ಹೀಗೆ ಕಲಾವಿದರ ಭವಿಷ್ಯದ ಭದ್ರತೆಗಾಗಿ ಕ್ರಿಯಾತ್ಮಕ ಯೋಜನೆಗಳು. ಕಲಾರಂಗಕ್ಕೆ ಬದ್ಧತೆಯೇ ಮಂತ್ರವಾಗಿರುವುದರಿಂದ ಉದ್ದೇಶಗಳ ಸುಲಲಿತ ಅನುಷ್ಠಾನ. 
                 ಉದ್ದೇಶಗಳು ಸ್ಪಷ್ಟಗೊಳ್ಳುತ್ತಿದ್ದಂತೆ, ಆರ್ಥಿಕ ಒಳಸುರಿಗಳತ್ತಲೂ ಚಿಂತನ, ಮಂಥನ. ಹತ್ತು ಮಂದಿ ಕಲಾವಿದರ ಯಕ್ಷ ಭಾವಚಿತ್ರ ಗುಚ್ಛ ಮಾರಾಟ. ಒಂದು ಗುಚ್ಛಕ್ಕೆ ನೂರು ರೂಪಾಯಿ. ನಿಧಿ ಸಂಗ್ರಹದ ಜತೆಗೆ ಕಲಾವಿದರ ಮತ್ತು ಯಕ್ಷಗಾನದ ಪ್ರಚಾರವೂ ಉದ್ದೇಶ. ವಿದ್ಯಾರ್ಥಿಗಳು, ದಾನಿಗಳು, ಕಲಾವಿದರು.. ನೆರವಾದರು. ಕಾಲಘಟ್ಟದಲ್ಲಿ ಒಂದು ಲಕ್ಷ ರೂಪಾಯಿ ಸಂಗ್ರಹ! ಕಲಾರಂಗದ ಚಟುವಟಿಕೆಗಳಿಗೆ ಆರ್ಥಿಕ ಅಡಿಗಟ್ಟಾಯಿತು. ವಿವಿಧ ಯೋಜನೆಗಳಿಗೆ ದಾನಿಗಳ ನೆರವೂ ಹರಿದು ಬಂತು.
                ಗುಂಪು ವಿಮೆ, ಜನಶ್ರೀ ಬಿಮಾ ಯೋಜನೆ, ಆರೋಗ್ಯ ವಿಮೆ, ಅಪಘಾತ ವಿಮೆಗಳಿಂದ ಕಲಾವಿದರಿಗೆ ಅನುಕೂಲವಾಗಿದೆ. ಕಲಾವಿದರು ನಿರಾಯಾಸವಾಗಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ರಂಗದಲ್ಲಿ ವೇಷತೊಟ್ಟುಬದುಕು-ಸಾವು ಅನಿಶ್ಚಿತವೆಂದು ರಂಗದ ಮೇಲೆ ಮಾರ್ಮಿಕವಾಗಿ ಹೇಳುತ್ತಾರೆ.  ಆದರೆ ತನ್ನ ನಿಜ ಬದುಕಿನಲ್ಲಿ ಭವಿಷ್ಯದ ಬಗ್ಗೆ ಯೋಚನೆ ಬೇಕಲ್ವಾ. “ಇಂತಹ ಯೋಜನೆಗಳಿಗೆ ಕಲಾವಿದರ ಮನಸ್ಸನ್ನು ಸಜ್ಜುಗೊಳಿಸುವುದು ದೊಡ್ಡ ಕೆಲಸ. ಮನಸ್ಸು ಸಜ್ಜಾಗುತ್ತಾ ಇದ್ದಾಗ ಅದನ್ನು ಮಸುಕು ಮಾಡುವ ಹಲವಾರು ಮನಸ್ಸುಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಸಂಘಟಿತವಾದ ಶಿಸ್ತು, ಮಾರ್ಗದರ್ಶಿ ನಡವಳಿಕೆ, ಸಮದರ್ಶಿತ್ವ ವ್ಯವಹಾರಗಳಿಂದ ಕಲಾರಂಗದ ಅಜೆಂಡಾಗಳೆಲ್ಲವೂ ಯಶ ಕಂಡಿವೆ. ಕಲಾವಿದರ ಮನಸನ್ನು ಗೆದ್ದಿವೆಎನ್ನುತ್ತಾರೆ ಕಾರ್ಯದರ್ಶಿ ಮುರಳಿ ಕಡೆಕಾರ್.
                ವಿದ್ಯಾಪೋಷಕ್ಧಾರವಾಡದಲ್ಲಿರುವ ಸರಕಾರೇತರ ಸೇವಾ ಸಂಸ್ಥೆ. ಕಲಾರಂಗಕ್ಕೆ ಅನುಷ್ಠಾನದ ಪ್ರಾದೇಶಿಕ ಪ್ರತಿನಿಧಿತ್ವ. ಇದರಿಂದ ವಿದ್ಯಾರ್ಥಿಗಳ ಅರ್ಥಿಕ ಸಂಕಷ್ಟಕ್ಕೆ ಸ್ಪಂದನ. ಎಷ್ಟೋ ಮಂದಿ ವಿದ್ಯಾರ್ಥಿಗಳು ಆರ್ಥಿಕ ಸಂಪನ್ಮೂಲಗಳ ಅಲಭ್ಯತೆಯಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವುದು ಕಾಣಬಹುದು. ವಿದ್ಯಾಪೋಷಕ್ ಇಂತಹ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಈಗ ಸೌಲಭ್ಯ ಪಡೆಯುವ ಪ್ರದೇಶದ ವ್ಯಾಪ್ತಿ ಹಿಗ್ಗಿದೆ.
                ಇನ್ನೊಂದು ಯಶಸ್ವೀ ಕಾರ್ಯಕ್ರಮಶಾಲೆಗಳಲ್ಲಿ ಯಕ್ಷ ಶಿಕ್ಷಣ. 2007ರಿಂದ ಆರಂಭ. ಆಗಿನ ಶಾಸಕ ರಘುಪತಿ ಭಟ್ಟರ ಕನಸು. ‘ಯಕ್ಷ ಶಿಕ್ಷಣ ಟ್ರಸ್ಟ್ಮೂಲಕ ಅನುಷ್ಠಾನ. “ಉಡುಪಿ ಆಸುಪಾಸಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪರಿಸರದ ಅನುಭವಿ ಕಲಾವಿದರಿಂದ ತರಬೇತಿ. ನಲವತ್ತನಾಲ್ಕು ಶಾಲೆಗಳ ಸುಮಾರು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಅನ್ಯಾನ್ಯ ಅನುದಾನ, ಕೊಡುಗೆಗಳನ್ನು ಕಲಾರಂಗವು ಪಾರದರ್ಶಕವಾಗಿ ಬಳಸಿ, ನಾಳಿನ ಯಕ್ಷಗಾನ ಮನಸ್ಸುಗಳನ್ನು ರೂಪಿಸುತ್ತಿವೆ. ಯಕ್ಷಗಾನ ಕಲಿಕೆಯು ಪಠ್ಯದ ಒಂದು ಭಾಗವಾಗಿರುವುದು ಮಕ್ಕಳ ಭಾಗ್ಯ. ಉಡುಪಿಯ ಯಶದ ಮಾದರಿಯು ಮುಂದಿದ್ದಾಗ ತೆಂಕಿನ ನೆಲದಲ್ಲಿ ಯಾಕೆ ಯಕ್ಷಶಿಕ್ಷಣ ಆರಂಭವಾಗಿಲ್ಲ ಎನ್ನುವುದು ನನ್ನ ಬಹುಕಾಲದ ಚೋದ್ಯ?
                ಯಕ್ಷಗಾನಕ್ಕೆ ಒಳ್ಳೆಯ ಕಲಾವಿದರನ್ನು ರೂಪಿಸುವಷ್ಟೇ ಮುಖ್ಯವಾಗಿ ಆಗಬೇಕಾದ ಕೆಲಸ ಒಳ್ಳೆಯ ಪ್ರೇಕ್ಷಕರನ್ನು ತಯಾರುಗೊಳಿಸುವುದು. ಕೆಲಸವು ಯಕ್ಷ ಶಿಕ್ಷಣ ಟ್ರಸ್ಟಿನ ಮೂಲಕ ಆಗುತ್ತಿದೆ ಎನ್ನುವುದು ಅಭಿಮಾನ ಪಡತಕ್ಕ ಸಂಗತಿ. ಪ್ರದರ್ಶನಗಳ ಸಂದರ್ಭದಲ್ಲಿ ರಾಜಾಂಗಣ ತುಂಬಿರುವುದೇ ಇದಕ್ಕೆ ಸಾಕ್ಷಿ. ಇಲ್ಲಿ ತರಬೇತಿ ಪಡೆದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಕಲಾವಿದರೂ ಆಗಬಹುದು. ಒಳ್ಳೆಯ ಪ್ರೇಕ್ಷಕರೂ ಆಗಬಹುದು.” ಕಲಾರಂಗದ ಆಶಯವನ್ನು ವಿದ್ಯಾರ್ಥಿಗಳು ಸುಳ್ಳು ಮಾಡಲಾರರು. 
                ಕಲಾರಂಗವು ನಲವತ್ತಮೂರು ವರುಷಗಳಲ್ಲಿ ಕಲಾವಿದರಿಗಾಗಿ, ಕಲಾವಿದರಿಗೋಸ್ಕರವಾಗಿ ಊರಿದ ಹೆಜ್ಜೆ ಅನನ್ಯ. ತಾಳಮದ್ದಳೆ ಸಪ್ತಾಹ, ರುಚಿಶುದ್ಧಿಯ ಪ್ರದರ್ಶಗಳು, ವಾರ್ಷಿಕ ಸಮಾವೇಶ, ಮಳೆಗಾಲದ ಪ್ರದರ್ಶನಗಳು, ಇಪ್ಪತ್ತು ಪ್ರಶಸ್ತಿಗಳ ನಿರ್ವಹಣೆ...ಗಳು ಕಾಲಕಾಲದ ಚಟುವಟಿಕೆಗಳು. “ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸಿದ್ದೇವೆ. ಕಲಾರಂಗವುಕಲಾವಿದರಿಂದ, ಕಲಾವಿದರಿಗೆ, ಕಲಾವಿದರಿಗೋಸ್ಕರವಾಗಿರೂಪುಗೊಂಡ ಸಂಸ್ಥೆ.” ಎನ್ನುತ್ತಾರೆ ಮುರಳಿ ಕಡೆಕಾರ್.
              ಕಲಾರಂಗದ ಈಗಿನ ಅಧ್ಯಕ್ಷ ಕೆ.ಗಣೇಶ ರಾವ್. ಉಪಾಧ್ಯಕ್ಷರು ಎಸ್.ವಿ.ಭಟ್, ಎಂ.ಗಂಗಾಧರ ರಾವ್, ಪಿ.ಕಿಶನ್ ಹೆಗ್ಡೆ. ಜತೆಕಾರ್ಯದರ್ಶಿಗಳು ನಾರಾಯಣ ಎಂ.ಹೆಗಡೆ, ಎಚ್.ಎನ್.ಶೃಂಗಶ್ವರ. ಕಲೆ, ಸಮಾಜಿಕ ಸ್ವಾಸ್ಥ್ಯದ ಕಾಳಜಿಯ ಕಾರ್ಯಕ್ಕೆ ಸು-ಮನಸರು ಸದಾ ಸ್ಪಂದಿಸುತ್ತಲೇ ಇರುತ್ತಾರೆ ಎನ್ನುವುದಕ್ಕೆ ಕಲಾರಂಗದ ಕಾರ್ಯಹೂರಣಗಳು ದೃಷ್ಟಾಂತವಾಗಿ ಕಣ್ಣಮುಂದೆ ನಿಲ್ಲುತ್ತದೆ.
                ಉಡುಪಿ ಕಲಾರಂಗಕ್ಕೆ ಸಾರಿಯ ಕಾಸರಗೋಡುಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನ ಪ್ರಶಸ್ತಿ. ಪ್ರತಿಷ್ಠಾನದ ಮುಖ್ಯಸ್ಥರು ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ. 2018 ಅಕ್ಟೋಬರ್ 21 ರವಿವಾರದಂದು ಮಂಗಳೂರು ಪುರಭವನದಲ್ಲಿ ಪ್ರಶಸ್ತಿ ಪ್ರದಾನ. ದಿನಪೂರ್ತಿ ಕಾರ್ಯಕ್ರಮ. “ಕಲಾವಿದರ ಕ್ಷೇಮಕ್ಕಾಗಿ ಹುಟ್ಟಿಕೊಂಡ ಸಂಸ್ಥೆಯು ನಾಲ್ಕು ದಶಕಕ್ಕೂ ಮಿಕ್ಕಿ ದುಡಿಯುತ್ತಿದೆ. ಇದಕ್ಕೆ ಕಲಾವಿದನಾಗಿ ನಾನೂ ಬಾಧ್ಯಸ್ಥನಾಗಿದ್ದೇನೆ. ಕಲೆ, ಕಲಾವಿದರ ಕುರಿತಾದ ಕಾಳಜಿಗೆ ಕೃತಜ್ಞತಾ ದ್ಯೋತಕವಾಗಿ ಪ್ರಶಸ್ತಿಗೆ ಕಲಾರಂಗವನ್ನು ಆಯ್ಕೆ ಮಾಡಿದ್ದೇವೆ,” ಎನ್ನುತ್ತಾರೆ ರಾಮಕೃಷ್ಣ ಮಯ್ಯರು.
Prajavani / ದಧಿಗಿಣತೋ / 18-10-2018

                  

No comments:

Post a Comment